ವಿಷಯಕ್ಕೆ ಹೋಗು

ಸಾಕ್ಷ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನ್ಯಾಯದೇವತೆಯ ಚಿತ್ರಣಗಳಲ್ಲಿ ಕಾಣಲಾಗುವ ತಕ್ಕಡಿಗಳು ಒಂದು ಕಾನೂನು ಪ್ರಕರಣದಲ್ಲಿ ಸಾಕ್ಷ್ಯದ ತೂಕಮಾಡುತ್ತಿರುವುದನ್ನು ಪ್ರತಿನಿಧಿಸುತ್ತವೆಂದು ಕಾಣಬಹುದು.

ವಿಶಾಲವಾಗಿ ವ್ಯಾಖ್ಯಾನಿಸಲಾದಾಗ, ಒಂದು ಸಮರ್ಥನೆಗೆ ಆಧಾರವಾಗಿ ಪ್ರಸ್ತುತಪಡಿಸಿದ ಯಾವುದಕ್ಕಾದರೂ ಸಾಕ್ಷ್ಯ ಎನ್ನಬಹುದು.[] ಈ ಆಧಾರ ಪ್ರಬಲ ಅಥವಾ ದುರ್ಬಲವಾಗಿರಬಹುದು. ಒಂದು ಸಮರ್ಥನೆಯ ಸತ್ಯದ ನೇರ ಪ್ರಮಾಣವನ್ನು ಒದಗಿಸುವಂಥದ್ದು ಸಾಕ್ಷ್ಯದ ಅತ್ಯಂತ ಬಲವಾದ ಪ್ರಕಾರವಾಗಿರುತ್ತದೆ. ಇನ್ನೊಂದು ಕೊನೆಗೆ ಸಾಂದರ್ಭಿಕ ಸಾಕ್ಷ್ಯದಂತಹ ಒಂದು ಸಮರ್ಥನೆಯೊಂದಿಗೆ ಕೇವಲ ಸಮಂಜಸವಾದ ಆದರೆ ಇತರ, ವಿರೋಧಾತ್ಮಕ ಸಮರ್ಥನೆಗಳನ್ನು ತಳ್ಳಿಹಾಕದಂಥ ಸಾಕ್ಷ್ಯವಿದೆ.

ಕಾನೂನಿನಲ್ಲಿ, ಒಂದು ಕಾನೂನು ಮೊಕದ್ದಮೆಯಲ್ಲಿ ಒಪ್ಪಿಕೊಳ್ಳಬಲ್ಲ ಸಾಕ್ಷ್ಯದ ಬಗೆಗಳನ್ನು ಸಾಕ್ಷ್ಯದ ನಿಯಮಗಳು ನಿರ್ಣಯಿಸುತ್ತವೆ. ಕಾನೂನಾತ್ಮಕ ಸಾಕ್ಷ್ಯಗಳ ಪ್ರಕಾರಗಳಲ್ಲಿ ದಾಖಲೆಯ ಸಾಕ್ಷ್ಯ ಮತ್ತು ವಸ್ತುದ್ರವ್ಯ ಸಾಕ್ಷ್ಯಗಳು ಸೇರಿವೆ. ವಿವಾದದಲ್ಲಿರದ ಕಾನೂನು ಪ್ರಕ್ರರಣದ ಭಾಗಗಳನ್ನು ಸಾಮಾನ್ಯವಾಗಿ ಪ್ರಕರಣದ ವಾಸ್ತವಾಂಶಗಳೆಂದು ಕರೆಯಲಾಗುತ್ತದೆ. ನಿರ್ವಿವಾದವಾದ ಯಾವುದೇ ವಾಸ್ತವಾಂಶಗಳಾಚೆಗೆ, ನ್ಯಾಯಾಧೀಶ ಅಥವಾ ನ್ಯಾಯದರ್ಶಿ ಮಂಡಲಿಗೆ ಸಾಮಾನ್ಯವಾಗಿ ಪ್ರಕರಣದ ಇತರ ವಿಷಯಗಳಿಗೆ ವಿಚಾರಣಾಧಿಕಾರಿಯಾಗುವ ಕೆಲಸ ವಹಿಸಲಾಗುತ್ತದೆ. ವಿವಾದಿತವಾದ ವಾಸ್ತವಾಂಶದ ಪ್ರಶ್ನೆಗಳನ್ನು ನಿರ್ಣಯಿಸಲು ಸಾಕ್ಷ್ಯ ಮತ್ತುನಿಯಮಗಳನ್ನು ಬಳಸಲಾಗುತ್ತದೆ. ಇವುಗಳಲ್ಲಿ ಕೆಲವು ಪ್ರಕರಣಕ್ಕೆ ಸಂಬಂಧಪಟ್ಟ ಕಾನೂನಾತ್ಮಕ ಪ್ರಮಾಣಬಾಧ್ಯತೆಯಿಂದ ನಿರ್ಧಾರಿತವಾಗಿರಬಹುದು. ಮರಣದಂಡನೆಯಂತಹ ಕೆಲವು ಪ್ರಕರಣಗಳಲ್ಲಿನ ಸಾಕ್ಷ್ಯ ಇತರ ಸಂದರ್ಭಗಳಲ್ಲಿ (ಉದಾ. ಅಮುಖ್ಯ ನಾಗರಿಕ ವಿವಾದಗಳು) ಇರುವುದಕ್ಕಿಂತ ಹೆಚ್ಚು ಬಲವಾಗಿರಬೇಕಾಗುತ್ತದೆ. ಇದು ಪ್ರಕರಣವನ್ನು ನಿರ್ಧರಿಸಲು ಅಗತ್ಯವಾದ ಸಾಕ್ಷ್ಯದ ಪ್ರಮಾಣ ಮತ್ತು ಗುಣಮಟ್ಟದ ಮೇಲೆ ತೀವ್ರವಾದ ಪ್ರಭಾವ ಬೀರುತ್ತದೆ.

ವೈಜ್ಞಾನಿಕ ವಿಧಾನಕ್ಕನುಗುಣವಾಗಿ ಸಂಗ್ರಹಿಸಿ ವ್ಯಾಖ್ಯಾನಿಸಲಾದಾಗ, ವೈಜ್ಞಾನಿಕ ಸಾಕ್ಷ್ಯವು ಒಂದು ವೈಜ್ಞಾನಿಕ ಊಹನೆ ಅಥವಾ ಸಿದ್ಧಾಂತವನ್ನು ಬೆಂಬಲಿಸುವ, ಅಲ್ಲಗಳೆಯುವ, ಅಥವಾ ಮಾರ್ಪಡಿಸುವ ಕಾರ್ಯನಿರ್ವಹಿಸುವ ವೀಕ್ಷಣೆಗಳು ಮತ್ತು ಪ್ರಾಯೋಗಿಕ ಫಲಿತಾಂಶಗಳನ್ನು ಹೊಂದಿರುತ್ತದೆ.

ತತ್ತ್ವಶಾಸ್ತ್ರದಲ್ಲಿ, ಸಾಕ್ಷ್ಯದ ಅಧ್ಯಯನ ಜ್ಞಾನಮೀಮಾಂಸೆಗೆ ನಿಕಟವಾಗಿ ಬಂಧಿತವಾಗಿದೆ. ಜ್ಞಾನಮೀಮಾಂಸೆಯು ಜ್ಞಾನದ ಸ್ವರೂಪ ಮತ್ತು ಅದನ್ನು ಹೇಗೆ ಪಡೆಯಬಹುದು ಎಂಬುದನ್ನು ಪರಿಗಣಿಸುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
"https://kn.wikipedia.org/w/index.php?title=ಸಾಕ್ಷ್ಯ&oldid=1164479" ಇಂದ ಪಡೆಯಲ್ಪಟ್ಟಿದೆ