ಶಿಕ್ಷೆ
ಶಿಕ್ಷೆ ಒಂದು ಗುಂಪು ಅಥವಾ ಒಬ್ಬ ವ್ಯಕ್ತಿಯ ಮೇಲೆ ಮಕ್ಕಳ ಶಿಸ್ತಿನಿಂದ ಕ್ರಿಮಿನಲ್ ಕಾನೂನಿನವರೆಗಿನ ಸನ್ನಿವೇಶಗಳಲ್ಲಿ ಒಂದು ಪ್ರಾಧಿಕಾರದಿಂದ ವಿಧಿಸಲಾದ ಅನಪೇಕ್ಷಿತ ಅಥವಾ ಅಹಿತಕರ ನಿರ್ಣಯದ ಹೇರಿಕೆ. ಶಿಕ್ಷೆಯನ್ನು ಅನಪೇಕ್ಷಿತ ಅಥವಾ ಅಸ್ವೀಕಾರ್ಯವೆಂದು ಪರಿಗಣಿಸಲಾದ ಒಂದು ನಿರ್ದಿಷ್ಟ ಕ್ರಿಯೆ ಅಥವಾ ವರ್ತನೆಗೆ ಪ್ರತಿಕ್ರಿಯೆ ಮತ್ತು ನಿರೋಧಕವಾಗಿ ನೀಡಲಾಗುತ್ತದೆ. ಸ್ವ ಅಪಾಯವನ್ನು ತಪ್ಪಿಸಲು ಮಗುವಿಗೆ ಷರತ್ತು ಹಾಕುವುದು, ಸಾಮಾಜಿಕ ಅನುಸರಣೆಯನ್ನು ಹೇರುವುದು (ವಿಶೇಷವಾಗಿ, ಕಡ್ಡಾಯ ಶಿಕ್ಷಣ ಅಥವಾ ಸೇನಾ ಶಿಸ್ತಿನ ಸನ್ನಿವೇಶಗಳಲ್ಲಿ), ರೂಢಿಗಳನ್ನು ಕಾಪಾಡುವುದು, ಭವಿಷ್ಯದ ಕೇಡುಗಳಿಂದ ರಕ್ಷಿಸುವುದು (ವಿಶೇಷವಾಗಿ, ಹಿಂಸಾತ್ಮಕ ಅಪರಾಧಗಳಿಂದ), ಕಾನೂನನ್ನು ಕಾಪಾಡುವುದು ಇದರ ಹಿಂದಿನ ವಾದವಾಗಿರಬಹುದು.[೧] ಶಿಕ್ಷೆಯು ಸ್ವಯಂವಿಹಿತವಾಗಿರಬಹುದು, ಉದಾ. ಧಾರ್ಮಿಕ ಹಿನ್ನೆಲೆಯಲ್ಲಿ ಸ್ವಯಂ ಕಶಾಪ್ರಹಾರ ಮತ್ತು ಸ್ವಯಂ ದಂಡನೆ, ಆದರೆ ಬಹುತೇಕ ವೇಳೆ ಸಾಮಾಜಿಕ ಒತ್ತಾಯದ ರೂಪವಾಗಿರುತ್ತದೆ.
ಅಹಿತಕರ ಹೇರಿಕೆಯು ದಂಡ, ನಿರ್ಬಂಧ, ಅಥವಾ ಸೆರೆವಾಸ, ಅಥವಾ ಏನಾದರೂ ಹಿತಕರ ಅಥವಾ ಅಪೇಕ್ಷಣೀಯವಾದದ್ದರ ನಿರಾಕರಣೆಯನ್ನು ಒಳಗೊಳ್ಳಬಹುದು. ಆ ಓರ್ವನು ವ್ಯಕ್ತಿ, ಅಥವಾ ಒಂದು ಪ್ರಾಣಿಯೂ ಆಗಿರಬಹುದು. ಪ್ರಾಧಿಕಾರವು ಒಂದು ಗುಂಪು ಅಥವಾ ಏಕ ವ್ಯಕ್ತಿಯಾಗಿರಬಹುದು, ಮತ್ತು ಶಿಕ್ಷೆಯನ್ನು ವಿಧ್ಯುಕ್ತವಾಗಿ ಕಾನೂನು ವ್ಯವಸ್ಥೆಯ ಅಡಿಯಲ್ಲಿ ಅಥವಾ ಅನೌಪಚಾರಿಕವಾಗಿ ಇತರ ಬಗೆಯ ಸಾಮಾಜಿಕ ಹಿನ್ನೆಲೆಗಳಲ್ಲಿ, ಉದಾ. ಕುಟುಂಬದೊಳಗೆ ನೀಡಬಹುದು. ಅಪರಾಧಗಳ ಶಿಕ್ಷೆಯ ಅಧ್ಯಯನ ಮತ್ತು ಆಚರಣೆಯನ್ನು, ವಿಶೇಷವಾಗಿ ಸೆರೆವಾಸಕ್ಕೆ ಅನ್ವಯಿಸುವುದನ್ನು, ದಂಡನಶಾಸ್ತ್ರವೆಂದು ಕರೆಯಲಾಗುತ್ತದೆ; ಶಿಕ್ಷೆಯ ಪ್ರಕ್ರಿಯೆಯನ್ನು ಸೌಮ್ಯೋಕ್ತಿಯಾಗಿ "ತಿದ್ದುಪಡಿ ಪ್ರಕ್ರಿಯೆ" ಎಂದು ಕರೆಯಲಾಗುತ್ತದೆ. ಶಿಕ್ಷೆಯಲ್ಲಿನ ಸಂಶೋಧನೆ ಹಲವುವೇಳೆ ತಡೆಗಟ್ಟುವಿಕೆಯಲ್ಲಿನ ಹೋಲುವ ಸಂಶೋಧನೆಯನ್ನು ಒಳಗೊಳ್ಳುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑
Hugo, Adam Bedau (February 19, 2010). "Punishment, Crime and the State". Stanford Encyclopedia of Philosophy. Retrieved 2010-08-04.
The search for a precise definition of punishment that exercised some philosophers (for discussion and references see Scheid 1980) is likely to prove futile: but we can say that legal punishment involves the imposition of something that is intended to be burdensome or painful, on a supposed offender for a supposed crime, by a person or body who claims the authority to do so.