ಬೀಗದ ಕೈ
ಬೀಗದ ಕೈಯು ಬೀಗವನ್ನು ನಿರ್ವಹಿಸಲು (ಉದಾಹರಣೆಗೆ ಬೀಗ ಹಾಕಲು ಅಥವಾ ತೆಗೆಯಲು) ಬಳಸಲಾಗುವ ಒಂದು ಸಾಧನ. ಒಂದು ಮಾದರಿ ಬೀಗದ ಕೈಯು ಎರಡು ಭಾಗಗಳನ್ನು ಹೊಂದಿರುವ ಲೋಹದ ಸಣ್ಣ ತುಂಡು. ಆ ಎರಡು ಭಾಗಗಳೆಂದರೆ: ಬಿಟ್ ಅಥವಾ ಬ್ಲೇಡ್, ಇದು ಬೀಗದ ದಾರಿಯೊಳಗೆ ಜಾರುತ್ತದೆ ಮತ್ತು ಭಿನ್ನ ಬೀಗದ ಕೈಗಳ ನಡುವೆ ವ್ಯತ್ಯಾಸ ಮಾಡುತ್ತದೆ; ಮತ್ತು ಉಂಗುರ, ಇದನ್ನು ಚಾಚಿಕೊಂಡಿರುವಂತೆ ಬಿಡಲಾಗುತ್ತದೆ, ಇದನ್ನು ಬಳಸಿ ಬಳಕೆದಾರನು ತಿರುಗುಬಲವನ್ನು ಪ್ರಯೋಗಿಸುತ್ತಾನೆ. ಬೀಗದ ಕೈಯು ಸಾಮಾನ್ಯವಾಗಿ ಒಂದು ನಿರ್ದಿಷ್ಟ ಬೀಗವನ್ನು ಅಥವಾ ಒಂದೇ ಬೀಗದ ಕೈಯಿಂದ ತೆರೆಯಲ್ಪಡುವ ಸಣ್ಣ ಸಂಖ್ಯೆಯ ಬೀಗಗಳನ್ನು ನಿರ್ವಹಿಸಲು ಉದ್ದೇಶಿತವಾಗಿರುತ್ತದೆ, ಹಾಗಾಗಿ ಪ್ರತಿ ಬೀಗಕ್ಕೆ ಒಂದು ಅನನ್ಯ ಬೀಗದ ಕೈಯು ಬೇಕಾಗುತ್ತದೆ. ಬೀಗದ ಕೈಯು ಒಂದು ಭದ್ರಪಡಿಸಿದ ಪ್ರದೇಶಕ್ಕೆ ಪ್ರವೇಶಕ್ಕಾಗಿ ಭದ್ರತಾ ಚಿಹ್ನೆಯಾಗಿ ಕಾರ್ಯನಿರ್ವಹಿಸುತ್ತದೆ; ಕೇವಲ ಸರಿಯಾದ ಬೀಗದ ಕೈಯನ್ನು ಹೊಂದಿರುವ ವ್ಯಕ್ತಿಗಳು ಬೀಗವನ್ನು ತೆರೆದು ಪ್ರವೇಶ ಪಡೆಯಬಹುದು. ಸಾಮಾನ್ಯ ಲೋಹಗಳಲ್ಲಿ ಹಿತ್ತಾಳೆ, ಲೇಪಿತ ಹಿತ್ತಾಳೆ, ನಿಕೆಲ್ ಬೆಳ್ಳಿ, ಮತ್ತು ಉಕ್ಕು ಸೇರಿವೆ.
ಬೀಗದ ಕೈಗಳು ಕಟ್ಟಡಗಳು, ವಾಹನಗಳು ಹಾಗೂ ಕಪಾಟುಗಳು ಅಥವಾ ಅಲಮಾರುಗಳಂತಹ ಭೌತಿಕ ಸ್ವತ್ತುಗಳಿಗೆ ಅಪೂರ್ಣವಾದರೂ ಅಗ್ಗದ, ಪ್ರವೇಶ ನಿಯಂತ್ರಣದ ವಿಧಾನವನ್ನು ಒದಗಿಸುತ್ತವೆ. ವಸ್ತುತಃ, ಬೀಗದ ಕೈಗಳು ಆಧುನಿಕ ಜೀವನದ ಅತ್ಯಗತ್ಯ ಲಕ್ಷಣವಾಗಿವೆ, ಮತ್ತು ವಿಶ್ವದಾದ್ಯಂತ ಸಾಮಾನ್ಯವಾಗಿವೆ. ಜನರು ತಮಗೆ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಬೇಕಾದ ಬೀಗದ ಕೈಗಳ ಸಮೂಹವನ್ನು ತಮ್ಮ ಜೊತೆಗೆ ಒಯ್ಯುವುದು ಸಾಮಾನ್ಯವಾಗಿದೆ. ಇವುಗಳು ಹಲವುವೇಳೆ ಉಂಗುರದಿಂದ ಜೋಡಿಸಲ್ಪಟ್ಟಿರುತ್ತವೆ. ಈ ಉಂಗುರವು ಸೂಸಕಗಳಿಂದ ಅಲಂಕರಿಸಲ್ಪಟ್ಟಿರಬಹುದು. ಇದನ್ನು ಸಾಮಾನ್ಯವಾಗಿ ಕೀಚೇಯ್ನ್ ಎಂದು ಕರೆಯಲಾಗುತ್ತದೆ.
ಪರಿಚಿತವಿರುವ ಅತ್ಯಂತ ಮುಂಚಿನ ಬೀಗ ಮತ್ತು ಬೀಗದ ಕೈ ಸಾಧನವನ್ನು ಪ್ರಾಚೀನ ಅಸ್ಸೀರಿಯದ ರಾಜಧಾನಿಯಾಗಿದ್ದ ನಿನವದ ಅವಶೇಷಗಳಲ್ಲಿ ಪತ್ತೆಹಚ್ಚಲಾಯಿತು.[೧] ಇದರಂತಹ ಬೀಗಗಳನ್ನು ನಂತರ ಈಜಿಪ್ಷಿಯನ್ ದಾರುವಿನ ಗೂಟವುಳ್ಳ ಬೀಗವಾಗಿ ಅಭಿವೃದ್ಧಿಗೊಳಿಸಲಾಯಿತು. ಇದು ಚಿಲಕ, ಬಾಗಿಲಿನ ಜೋಡಣೆ, ಮತ್ತು ಬೀಗದ ಕೈಯನ್ನು ಹೊಂದಿತ್ತು. ಬೀಗದ ಕೈಯನ್ನು ಒಳತೂರಿಸಲಾದಾಗ, ಜೋಡಣೆಯೊಳಗಿನ ಗೂಟಗಳನ್ನು ಚಿಲಕದೊಳಗಿನ ಕೊರೆಯಲಾದ ರಂಧ್ರಗಳಿಂದ ಮೇಲೇರಿಸಲಾಗುತ್ತಿತ್ತು, ಮತ್ತು ಇದರಿಂದ ಅದಕ್ಕೆ ಚಲಿಸಲು ಅನುಮತಿ ನೀಡಲಾಗುತ್ತಿತ್ತು. ಬೀಗದ ಕೈಯನ್ನು ಹೊರಗೆ ತೆಗೆಯಲಾದಾಗ, ಗೂಟಗಳು ಭಾಗಶಃ ಚಿಲಕದಲ್ಲಿ ಕೆಳಬೀಳುತ್ತಿದ್ದವು ಮತ್ತು ಇದರಿಂದ ಚಲನೆ ಸಾಧ್ಯವಾಗುತ್ತಿರಲಿಲ್ಲ.
ಉಲ್ಲೇಖಗಳು
[ಬದಲಾಯಿಸಿ]- ↑ de Vries, N. Cross and D. P. Grant, M. J. (1992). Design Methodology and Relationships with Science: Introduction. Eindhoven: Kluwer Academic Publishers. p. 32. Archived from the original on 24 ಏಪ್ರಿಲ್ 2016.
{{cite book}}
: Unknown parameter|deadurl=
ignored (help)